ಮೋಸ ಹೋದೆನಲ್ಲಾ
ರಾಗ: ಧನ್ಯಾಸಿ;    ತಾಳ: ಆದಿ
ಮೋಸ ಹೋದೆನಲ್ಲಾ ತಿಳಿಯದೆ ಮೋಸ ಹೋದೆನಲ್ಲಾ || ಪ ||

ಕ್ಲೇಶಪಾಶವನು ನಾಶಮಾಡುವ
ಶ್ರೀಶನಂಘ್ರಿಗಳ ಲೇಸಾಗಿ ಸ್ಮರಿಸದೆ || ೧ || -ಮೋಸ ಹೋದೆನಲ್ಲಾ 

ಕಾಯದಾಶೆಯಿಂದ ಕಂಡದ್ದು ಬೇಡಿ ಶ್ವಾನನಂತೆ
ಮಾಯಪಾಶದಲಿ ಸಿಲುಕಿ ನಾನು ಮಾರಮಣನೆ ನಿನ್ನ ಧ್ಯಾನಮಾಡದೇ || ೨ || -ಮೋಸ ಹೋದೆನಲ್ಲಾ 

ಪುಷ್ಪ ಜಾಜಿಗಳನು ಮಲ್ಲಿಗೆ ಭಕ್ತಿಭಾವದಿಂದ ತಂದು
ಕೃಷ್ಣಾವತಾರನ ಪೂಜೆಯ ಮಾಡಿ ವಿಷ್ಣುಲೋಕವನು ಸೂರೆಗೊಳ್ಳದೆ || ೩ || - ಮೋಸ ಹೋದೆನಲ್ಲಾ 

ಸತಿಸುತಾದಿ ಬಂಧುಬಳಗ ಹಿತವ ನುಡಿವರ್ಯಾರೋ
ಗತಿ ನೀನೆ ತಂದೆತಾಯಿ ನೀನೆ ಸದ್ಗತಿ ಈಯೋ ಪುರಂದರವಿಟ್ಠಲ || ೪ || -ಮೋಸ ಹೋದೆನಲ್ಲಾ -- ದಾಸವಾಣಿ
ರಚನೆ ಪುರದರದಾಸರು.

ನೋಡಿ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪುರಂದರದಾಸರ ಸಾಹಿತ್ಯ
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ